Site icon BosstvKannada

ರಾಜಕೀಯ ವೈಷಮ್ಯ ಮರೆತು ಮದುವೆ ಮನೆಯಲ್ಲಿ ಒಂದಾದ ಯಡಿಯೂರಪ್ಪ, ಈಶ್ವರಪ್ಪ!

ಮದುವೆ ಮನೆಯಲ್ಲಿ ರಾಜಕೀಯ ವೈಷಮ್ಯ ಮರೆತು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಈಶ್ವರಪ್ಪ ಒಂದಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಈಶ್ವರಪ್ಪ ಕಾಣಿಸಿಕೊಂಡಿದ್ದಾರೆ. ಸಂಸದ ರಾಘವೇಂದ್ರ ಮಗನ ಆರತಕ್ಷತೆ ಕಾರ್ಯಕ್ರಮಕ್ಕೆ ಈಶ್ವರಪ್ಪ ಹಾಗೂ ಅವರ ಪುತ್ರ ಕಾಂತೇಶ್ ಆಗಮಿಸಿದ್ದಾರೆ..

ಈ ವೇಳೆ ಈಶ್ವರಪ್ಪರನ್ನ ಯಡಿಯೂರಪ್ಪ ಅವರು ಸ್ವಾಗತ ಮಾಡಿದ್ದಾರೆ. ಜೊತೆಗೆ ಈಶ್ವರಪ್ಪ ಹೆಗಲ ಮೇಲೆ ಕೈಯಿಟ್ಟು ಮಾತನಾಡಿಸಿ ಫೋಟೋ ಪೋಸ್‌ ಕೊಟ್ಟಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೆನ್ನು ತಟ್ಟಿ ಈಶ್ವರಪ್ಪ ಮಾತನಾಡಿಸಿದ್ದಾರೆ.

ಈಶ್ವರಪ್ಪ, ಯಡಿಯೂರಪ್ಪ ವೈಷಮ್ಯವೇನು?
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಕುಟುಂಬ ರಾಜಕಾರಣದ ಬಾಣ ಬಿಟ್ಟು ಅವರ ಪಕ್ಷದ ವಿರುದ್ಧವೇ ನಾಲಗೆ ಹರಿಬಿಟ್ಟಿದ್ರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ಈಶ್ವರಪ್ಪ ತೊಡೆ ತಟ್ಟಿದ್ರು. ಹೀಗಾಗಿ ಈಶ್ವರಪ್ಪ, ಯಡಿಯೂರಪ್ಪ ಮಧ್ಯೆ ಮನಸ್ತಾಪ ಉಂಟಾಗಿತ್ತು.

ಆದ್ರೀಗ ಸಂಸದ ರಾಘವೇಂದ್ರ ಮಗನ ಆರತಕ್ಷತೆ ಕಾರ್ಯಕ್ರಮಕ್ಕೆ ಈಶ್ವರಪ್ಪನಿಗೆ ಆಹ್ವಾನಿಸಲಾಗಿದ್ದು, ಪುತ್ರ ಕಾಂತೇಶ್‌ನೊಂದಿಗೆ ರಿಸಪ್ಶನ್‌ಗೆ ಈಶ್ವರಪ್ಪ ಆಗಮಿಸಿದ್ದಾರೆ. ಇದ್ರಿಂದ ಇವರಿಬ್ಬರ ಮಧ್ಯೆ ಇದ್ದ ವೈಷಮ್ಯ ಈಗ ಮರೆತಿದ್ದಾರೆಂದೆ ಅರ್ಥ.. ಇಬ್ಬರು ಆರತಕ್ಷತೆಯಲ್ಲಿ ಒಂದಾಗಿದ್ದು, ನೋಡುಗರಿಗೆ ಶಾಕ್‌ ನೀಡಿದ್ದಾರೆ. ಎಲ್ಲವನ್ನೂ ಮರೆತು ಮದುವೆ ಮನೆಯಲ್ಲಿ ಇಬ್ಬರು ಆತ್ಮೀಯತೆಯಿಂದ ಮಾತನಾಡಿದ್ದಾರೆ. ಇವರ ಈ ವಿಡಿಯೋ ಸದ್ಯ ಸೋಷಿಯಲ್‌ ಮೀಡಿಯಾದಲಿ ವೈರಲ್‌ ಆಗಿದೆ.

Exit mobile version