Site icon BosstvKannada

ರಬಡ ದಾಳಿಗೆ ಆಸಿಸ್‌ ಪಡೆ ಉಡೀಸ್..!

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಲಾರ್ಡ್ಸ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೆಣಸಾಡುತ್ತಿವೆ. ಆಸ್ಟ್ರೇಲಿಯಾ ತಂಡ ಇದೀಗ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಗುರಿಯಲ್ಲಿದೆ. ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು 2023ರ ಆವೃತ್ತಿಯಲ್ಲಿ ಭಾರತವನ್ನು ಸೋಲಿಸಿತ್ತು. ಇನ್ನು ದಕ್ಷಿಣ ಆಫ್ರಿಕಾ ತಂಡ 1998ರ ನಂತರ ಮೊದಲ ಐಸಿಸಿ ಟ್ರೋಫಿಗಾಗಿ ಎದುರು ನೋಡುತ್ತಿದೆ. ಆದರೆ ಮೊದಲ ದಿನವೇ ಹರಿಣಗಳ ದಾಳಿಗೆ ಆಸಿಸ್‌ ಪಡೆ ಕಂಗಾಲಾಗಿದೆ.

ಮೊದಲ ದಿನ ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ಪಡೆ ದಕ್ಷಿಣ ಆಫ್ರಿಕಾ ಕಗಿಸೋ ರಬಡಾ ಮತ್ತು ಮಾರ್ಕೋ ಜಾನ್ಸನ್‌ ದಾಳಿಗೆ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಗಿದೆ. ಕಗಿಸೋ ರಬಡಾ ಐದು ವಿಕೆಟ್‌ ಮತ್ತು ಮಾರ್ಕೋ ಜಾನ್ಸನ್‌ ಮೂರು ವಿಕೆಟ್‌ ಪಡೆದ್ರೆ, ಕೇಶವ್‌ ಮಹರಾಜ್‌, ಎಡಮ್‌ ಮರ್ಕಮ್‌ ತಲಾ ಒಂದು ವಿಕೆಟ್‌ ಪಡೆದ್ರು.

ಇನ್ನು ಆಸ್ಟ್ರೇಲಿಯಾ ಪರ ಸ್ಟೀವನ್‌ ಸ್ಮಿತ್‌ 66 ರನ್‌, ವೆಬ್‌ಸ್ಟರ್‌ 72 ರನ್‌ ಗಳಿಸಿದ್ರೆ, ಇನ್ನುಳಿದವರು ಅಲ್ಪ ಮೊತ್ತ ಪೇರಿಸಿ ಔಟ್‌ ಆದ್ರು. 212 ರನ್‌ ಗಳಿಸುವಷ್ಟರಲ್ಲಿ ಆಸಿಸ್‌ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಆಲೌಟ್‌ ಆಯ್ತು. ಇನ್ನು ಇನ್ನಿಂಗ್ಸ್‌ ಆರಂಭಿಸಿದ ಸೌತ್‌ ಆಫ್ರಿಕಾ ಆರಂಭದಲ್ಲಿ ಮರ್ಕರಮ್‌ ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿದೆ.

Exit mobile version