
ಮುದುವೆ ಬಗ್ಗೆ ಮೋಕ್ಷಿತಾ ಪೈ(Mokshitha pai) ಶಾಕಿಂಗ್ ಮಾತು, ಬಿಗ್ ಬಾಸ್(Bigg boss) ಮೋಕ್ಷಿತಾ ಪೈ ಮದುವೇನೇ ಆಗೋದಿಲ್ವಾ? ಮದುವೆ ಆಗದೇ ಇರೋಕೆ ಕರಾಳ ಘಟನೆನೇ ಕಾರಣನಾ? ಅಷ್ಟಕ್ಕೂ ಮೋಕ್ಷಿತಾ ಪೈ ಲವ್ ಅಂಡ್ ಲೈಫ್‌ನಲ್ಲಿ ಆಗಿದ್ದೇನು?
ಬಿಗ್ ಬಾಸ್ ಮೋಕ್ಷಿತಾ ಪೈ ಲವ್ ಅಂಡ್ ಲೈಫ್ ಬಗ್ಗೆ ಇದೇ ಮೊದಲ ಬಾರಿಗೆ ಮೋಕ್ಷಿತಾ ಪೈ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್(Bigg Boss) ಮನೆಯ ಸ್ಪರ್ಧಿ ಮೋಕ್ಷಿತಾ ಪೈ ಸೈಲೆಂಟ್ ಆಗಿದ್ದಾರೆ. ಮಾತು ಕಡಿಮೇನೆ ಬಿಡಿ. ಆದರೆ, ಇದೀಗ ಸ್ವಲ್ಪ ಜೋರಾಗಿಯೇ ಮಾತ್ ಆಡುತ್ತಿದ್ದಾರೆ. ಇದರಿಂದ ಮನೆಯಲ್ಲಿ ವಾತಾವರಣ ಚೇಂಜ್ ಆಗಿದೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಆ ಒಂದು ಸತ್ಯವನ್ನು ಮೋಕ್ಷಿತಾ ಹೇಳಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ಮೋಕ್ಷಿತಾ ಪೈ ಮನ ಬಿಚ್ಚಿ ಮಾತನಾಡಿದ್ದು, ಮನದಲ್ಲಿರೋ ನೋವು ಏನಿದೆ ಅದನ್ನು ಹೇಳಿಕೊಂಡಿದ್ದಾರೆ. ಸಧ್ಯ ಮದುವೆ ಆಗುವಂತೆ ಮನೆ ಮಂದಿ ಕೂಡ ಒತ್ತಾಯಿಸುತ್ತಿದ್ದಾರೆ. ಆದರೆ, ಮನೆಯ ಮಂದಿಯ ಒತ್ತಡದ ಮಧ್ಯೆನೂ ಮೋಕ್ಷಿತಾ ಮದುವೆ ಆಗೋಕೆ ಮನಸು ಮಾಡ್ತಿಲ್ಲ. ಅದಕ್ಕೆ ಏನು ಕಾರಣ ಅನ್ನೋದನ್ನ ಕೂಡ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.
ನನ್ನ ಮನೆಯಲ್ಲಿ ಸದ್ಯ ಮದುವೆ ಒತ್ತಡ ತುಂಬಾ ಇದೆ. ಮದುವೆ ಆಗುವ ಅಂತ ಕಳೆದ ಒಂದು ವರ್ಷದಿಂದ ಅಪ್ಪ ಮತ್ತು ಅಮ್ಮ ಹೇಳ್ತಾನೇ ಇದ್ದಾರೆ. ಆದರೆ, ಮದುವೆ ಆಗೋಕೆ ನನಗೆ ಭಯ ಇದೆ. ನಾನು ಮದುವೆ ಆದ್ರೆ ನನ್ನ ಅಪ್ಪ ಅಮ್ಮನನ್ನ ನೋಡೋರು ಯಾರು? ನನ್ನ ತಮ್ಮ ಬೇರೆ ವಿಶೇಷ ಚೇತನನೇ ಆಗಿದ್ದಾನೆ. ಹಾಗಾಗಿಯೇ ನಮ್ಮ ತಂದೆ-ತಾಯಿಗೆ ನಾನು ಮಗ ಮತ್ತು ಮಗಳು ಎರಡೂ ಆಗಿದ್ದೇನೆ. ಆದರೂ, ಮದುವೆ ಒತ್ತಡ ಜಾಸ್ತಿನೇ ಆಗಿದೆ ಅಂತಲೂ ಮೋಕ್ಷಿತಾ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಹಲವು ಬರೀ ನಾನು ನನ್ನ ಅಮ್ಮ ಮತ್ತು ಅಪ್ಪನಿಗೆ ಬೈದಿರೋದು ಇದೆ. ಸಿಟ್ಟಿನಿಂದ ಕೂಗಾಡಿದ್ದು ಇದೆ. ಅದನ್ನ ನೆನಪಿಸಿಕೊಂಡ್ರೆ ತುಂಬಾನೆ ಬೇಸರ ಆಗುತ್ತದೆ ಮೋಕ್ಷಿತಾ ಪೈ ಎಮೊಷನ್ ಆಗಿದ್ದಾರೆ.