18 ವರ್ಷಗಳಿಂದ ಸತತ ನಿರಾಸೆ ಅನುಭವಿಸಿದ್ದ ಕಿಂಗ್‌ ಕೊಹ್ಲಿ ಕಪ್‌ ಗೆಲ್ತಿದ್ದಂತೆ ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.. ಐಪಿಎಲ್‌ ಶುರುವಾದಾಗಿಂದ ಅಂದರೆ 2008ರಿಂದ ಆರ್‌ಸಿಬಿ ಕಪ್‌ ಗೆದ್ದಿರಲಿಲ್ಲ.. ಆದ್ರೆ, 17 ವರ್ಷಗಳ ಕಾಯುವಿಕೆ ಅಂತ್ಯಗೊಂಡಿದೆ.. 17 ವರ್ಷಗಳ ಕಪ್‌ ಗೆಲ್ಲುವ ವನವಾಸ ಮುಗಿದಿದೆ.. ಆರ್‌ಸಿಬಿಯ ಕೋಟಿ ಕೋಟಿ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ..

ಬೆಂಗಳೂರು ತಂಡದ ಅಭಿಮಾನಿಗಳ ಪ್ರೀತಿ, ಪ್ರೋತ್ಸಾಹ ಕೊನೆಗೂ ಗೆದ್ದು ಹೊಸ ಚರಿತ್ರೆ ಬರೆದಿದೆ. ಈ ಅಮೂಲ್ಯ ವಾದ ಗಳಿಗೆಯಲ್ಲಿ 18 ವರ್ಷಗಳಿಂದ ಆರ್‌ಸಿಬಿ ತಂಡದ ಪರವಾಗಿ ಆಡುತ್ತಿರುವ ರನ್‌ ಮಷಿನ್‌ ವಿರಾಟ್‌ ಕೊಹ್ಲಿ, ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.. ಆರ್‌ಸಿಬಿ ಮ್ಯಾಚ್‌ ಗೆಲ್ಲುತ್ತಿದ್ದಂತೆ ಮೈದಾನದಲ್ಲೇ ವಿರಾಟ್‌ ಕೊಹ್ಲಿ, ಪಿಚ್‌ಗೆ ಮುತ್ತಿಕ್ಕಿ ಕಣ್ಣೀರಿಟ್ಟರು.. ಕೆಲ ಕ್ಷಣ ಕಣ್ಣೀರಿಡುತ್ತಲೇ ಪಿಚ್‌ಗೆ ಹಣೆ ಇಟ್ಟಿದ್ದ ಕೊಹ್ಲಿ ಆ ಮೇಲೆ ತಲೆ ಮೇಲಕ್ಕೆ ಎತ್ತಿದಾಗ ಇಡೀ ಮೈದಾನವೇ ಒಂದು ಕ್ಷಣ ಸ್ಟನ್‌ ಆಗಿತ್ತು..

ಗ್ಯಾಲರಿಯಲ್ಲಿದ್ದ ಆರ್‌ಸಿಬಿ ಅಭಿಮಾನಿಗಳು ಭಾವುಕರಾಗಿದ್ರು.. ಆ ಎಮೋಷನಲ್ ಮೂವ್ಮೆಂಟ್ ಎಲ್ಲರನ್ನೂ ಮಂತ್ರಮುಗ್ದರನ್ನಾಗಿಸಿತ್ತು.. ಇದಾದ ಮೇಲೆ ಆಟಗಾರರೆಲ್ಲಾ ಬಂದು ವಿರಾಟ್‌ ಕೊಹ್ಲಿಯನ್ನು ಬಿಗಿದಪ್ಪಿ ವಿಶ್‌ ಮಾಡಿದರು.. ಆ ನಂತರ ಮೈದಾನಕ್ಕೆ ಬಂದ ಪತ್ನಿ ಅನುಷ್ಕಾ ಶರ್ಮಾರನ್ನು ತಬ್ಬಿಕೊಂಡು ವಿರಾಟ್‌ ಕೊಹ್ಲಿ ಭಾವುಕರಾಗಿ ಸಂಭ್ರಮಿಸಿದರು…

ಈ ಫೋಟೋ, ವಿಡಿಯೋಗಳು ಜಗತ್ತಿನ ಮೂಲೆ ಮೂಲೆಯುದ್ದಕ್ಕೂ ಸಂಚಲನ ಸೃಷ್ಟಿಸಿವೆ.. ಇನ್ನೊಂದ್ಕಡೆ, ವಿಜಯೋತ್ಸವದ ಬಗ್ಗೆ ಮಾತಾಡಿದ ವಿರಾಟ್‌ ಕೊಹ್ಲಿ, ಮಿಸ್ಟರ್‌ 360 ಡಿಗ್ರಿ ಎಬಿಡಿ ವಿಲಿಯರ್ಸ್‌ ಹಾಗೂ ಕ್ರಿಸ್‌ ಗೇಲ್‌ರನ್ನು ನೆನಪಿಸಿಕೊಂಡಿದ್ದು ಅಭಿಮಾನಿಗಳು ಥ್ರಿಲ್‌ ಆಗುವಂತೆ ಮಾಡ್ತು..‌

Share.
Leave A Reply