BosstvKannada

ಮುಂದಿನ 3 ಐಪಿಎಲ್ ಸೀಸನ್‌ಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಈ ಬಾರಿಯ ಐಪಿಎಲ್ ಆಟಗಾರರ ಹರಾಜಿಗೆ ಇನ್ನು ಎರಡು ದಿನ ಬಾಕಿ ಇದೆ… ಇದರ ನಡುವೆ 2025ರ ಸೀಸನ್ ಸೇರಿದಂತೆ 2026 ಹಾಗೂ 2027ರ ಸೀಸನ್‌ಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಇಂದು 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ವೇಳಾಪಟ್ಟಿ ಪ್ರಕಟಿಸಿದ್ದು, ಜೊತೆಗೆ 2026 ಹಾಗೂ 2027ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಮೂರು ಸೀಸನ್‌ಗಳ ವೇಳಾಪಟ್ಟಿಯನ್ನು ಒಟ್ಟಿಗೆ ಬಿಡುಗಡೆ ಮಾಡುವ ಮೂಲಕ ಬಿಸಿಸಿಐ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.

2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಂದು ಪ್ರಾರಂಭವಾಗಿ ಮೇ 25ರವರೆಗೆ ನಡೆಯಲಿದೆ. ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿಯಂತೆ 2026ರ ಟೂರ್ನಿಯು ಮಾರ್ಚ್ 15 ರಂದು ಪ್ರಾರಂಭವಾಗಿ ಮೇ 31 ರವರೆಗೆ ನಡೆಯಲಿದೆ ಹಾಗೂ 2027ರ ಟೂರ್ನಿಯು ಮಾರ್ಚ್ 14 ರಂದು ಪ್ರಾರಂಭವಾಗಿ ಮೇ 30 ರವರೆಗೆ ನಡೆಯಲಿದೆ ಎಂದು ತಿಳಿಸಿದೆ.

ಕೇವಲ 2025ರ ಸೀಸನ್​ ಮಾತ್ರವಲ್ಲ 2026 ಹಾಗೂ 2027ರ ಆವೃತ್ತಿಯ ಮುಂದಿನ ಮೂರು ಸೀಸನ್‌ಗಳಿಗೆ ಈ ಪ್ರಮುಖ ದಿನಾಂಕಗಳನ್ನು ಈಗಾಗಲೇ ಘೋಷಿಸಲಾಗಿದೆ. ಈ ಬಗ್ಗೆ ಎಲ್ಲಾ ಹತ್ತು ಫ್ರಾಂಚೈಸಿಗಳಿಗೆ ತಿಳಿಸಲಾಗಿದೆ.

ಮುಂದಿನ ವರ್ಷದ ಐಪಿಎಲ್‌ನಲ್ಲಿ 18ನೇ ಸೀಸನ್‌ನ ಭಾಗವಾಗಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಇದರಲ್ಲಿ 70 ಲೀಗ್ ಪಂದ್ಯಗಳು ನಡೆಯಲಿದ್ದು, ಉಳಿದ ನಾಲ್ಕು ಪ್ಲೇಆಫ್ ಪಂದ್ಯಗಳಾಗಿವೆ. ಮುಂದಿನ ಮೂರು ವರ್ಷಗಳ ಕಾಲ ಈ ದಿನಾಂಕಗಳಲ್ಲಿ ಐಪಿಎಲ್ ಆಡಲು ವಿದೇಶಿ ಆಟಗಾರರು ಈಗಾಗಲೇ ತಮ್ಮ ಮಂಡಳಿಗಳಿಂದ ಅನುಮತಿ ಪಡೆಯಲು ಮುಂದಾಗಿದ್ದಾರೆ.

Exit mobile version