ಕಳೆದ ವರ್ಷ ಮಾಲ್ಡೀವ್ಸ್ನ ಸುದ್ದಿಯೊಂದು ಸಖತ್ ಟ್ರೇಂಡ್ನಲ್ಲಿತ್ತು. ಭಾರತೀಯರು ಮಾಲ್ಡೀವ್ಸ್ ವಿಸಿಟ್ ಬಗ್ಗೆ ಬಾಯ್ಕಾಟ್ಅಭಿಯಾನ ಕೂಡ ಮಾಡಿದ್ರು.. ಈಗ ಮಾಲ್ಡೀವ್ಸ್ ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಭಾರತೀಯರು ಬಾಯ್ಕಾಟ್ ಮಾಡಿರೋ ಮಾಲ್ಡೀವ್ಸ್ ಪ್ರವಾಸೋದ್ಯಮ ಈಗ ಬಾಲಿವುಡ್ ಬ್ಯೂಟಿಯನ್ನ ತನ್ನ ಪ್ರವಾಸೋದ್ಯಮದ ರಾಯಭಾರಿಯಾಗಿ ನೇಮಕ ಮಾಡಿದೆ. ಭಾರತೀಯರನ್ನ ಸೆಳೆಯಲು ನಟಿ ಕತ್ರಿನಾ ಕೈಫ್ ಅವರನ್ನ ರಾಯಭಾರಿಯಾಗಿ ಮಾಡಲಾಗಿದೆ ಎನ್ನಲಾಗಿದೆ.
ಕಳೆದ ವರ್ಷ ಮಾಲ್ಡೀವ್ಸ್ನ ಮೂವರು ಯುವ ಸಚಿವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಕಾರಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಭಾರತ-ಮಾಲ್ಡೀವ್ಸ್ ಸಂಬಂಧ ಹದಗೆಟ್ಟಿತ್ತು. ಮಾಲ್ಡೀವ್ಸ್ ಬಹಿಷ್ಕರಿಸಿ ಮತ್ತು ‘ಲಕ್ಷದ್ವೀಪ ಚಲೋ’ ಎಂಬ ಘೋಷಣೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಸದ್ಯ ಬಾಲಿವುಡ್ ನಟಿ ಕತ್ರೀನಾ ಕೈಫ್ ಅವರನ್ನ ‘ಸನ್ನಿ ಸೈಡ್ ಆಫ್ ಲೈಫ್’ ನ ಗ್ಲೋಬಲ್ ಬ್ರಾಂಡ್ ರಾಯಭಾರಿಯಾಗಿ ನೇಮಿಸಿದೆ. ಬ್ರಾಂಡ್ ಅಂಬಾಸಿಡರ್ ಆದ ಬಗ್ಗೆ ಮಾತನಾಡಿದ ಕತ್ರಿನಾ ಅವರು, “ಮಾಲ್ಡೀವ್ಸ್ ಐಷಾರಾಮಿ ಮತ್ತು ನೈಸರ್ಗಿಕ ಸೌಂದರ್ಯದ ಅದ್ಭುತ ಸಮ್ಮಿಲನ. ಇದು ಶಾಂತಿ ಮತ್ತು ಭವ್ಯತೆ ಒಟ್ಟಿಗೆ ಸೇರುವ ಸ್ಥಳ.
‘ಸನ್ನಿ ಸೈಡ್ ಆಫ್ ಲೈಫ್’ ನ ಮುಖವಾಗಿರುವುದು ನನಗೆ ಗೌರವ. ಈ ಸಹಯೋಗದ ಮೂಲಕ, ಪ್ರಪಂಚದಾದ್ಯಂತದ ಜನರಿಗೆ ಮಾಲ್ಡೀವ್ಸ್ನ ಅನನ್ಯತೆ ಮತ್ತು ಸಾಟಿಯಿಲ್ಲದ ಪ್ರಯಾಣದ ಅನುಭವಗಳನ್ನು ಪರಿಚಯಿಸಲು ನಾನು ಉತ್ಸುಕನಾಗಿದ್ದೇನೆ” ಎಂದು ಹೇಳಿದರು. ಕತ್ರಿನಾ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಹನಿಮೂನ್ನಿಂದ ವಾರ್ಷಿಕ ಪ್ರವಾಸಗಳವರೆಗೆ ಮಾಲ್ಡೀವ್ಸ್ನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದರು.
