Site icon BosstvKannada

ಮದುವೆ ಆಗದೆಯೇ ಅವಳಿ ಮಕ್ಕಳಿಗೆ ಗರ್ಭಿಣಿಯಾದ 40ರ ನಟಿ ಭಾವನಾ.. ಇದಕ್ಕೆ ನೀವೇನಂತೀರಾ?

ಸ್ಯಾಂಡಲ್‌ವುಡ್‌ ನಟಿ, ರಾಜಕಾರಣಿ ಭಾವನಾ ರಾಮಣ್ಣ ತಾಯ್ತನದ ಸಂಭ್ರಮದಲ್ಲಿದ್ದಾರೆ. ತಮ್ಮ ನಲ್ವತ್ತನೇ ವಯಸ್ಸಿನಲ್ಲಿ ತಾಯಿಯಾಗ್ತಿದ್ದಾರೆ. ದಾಂಪತ್ಯ ಜೀವನದ ಬಗ್ಗೆ ಆಸಕ್ತಿ ತೋರದ ಭಾವನಾ, ಮದುವೆಯಾಗದೇ ಸಿಂಗಲ್‌ ಪೆರಂಟ್‌ ಆಗಿ ಎರಡು ಮಕ್ಕಳಿಗೆ ಜನ್ಮನೀಡಲಿದ್ದಾರೆ. ಮದುವೆಯಾಗದೇ ಐವಿಎಫ್‌ ಮೂಲಕ ಗರ್ಭಿಣಿಯಾಗಿದ್ದಾರೆ. ಇನ್ನು ಈ ಬಗ್ಗೆ ಖುದ್ದು ನಟಿ ಭಾವನಾ ಮಾಹಿತಿಯನ್ನ ತಮ್ಮ ಇನ್ಟಾಗ್ರಾಂನಲ್ಲಿ ರೀವಿಲ್‌ ಮಾಡಿದ್ದಾರೆ.

ಸದ್ಯ ಆರು ತಿಂಗಳ ಗರ್ಭಿಣಿಯಾಗಿರುವ ಭಾವನ ಅವಳಿ ಮಕ್ಕಳ ಜನನಕ್ಕೆ ಎದುರು ನೋಡ್ತಾ ಇದ್ದಾರೆ. ತಮ್ಮ ಪ್ರಗ್ನೆನ್ಸಿ ಫೋಟೋಗಳನ್ನ ಭಾವನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಹಿಂದೆ ತಾಯ್ತನದ ಬಗ್ಗೆ ಯಾವುದೇ ಆಕಾಂಕ್ಷೆ ಇರ್ಲಿಲ್ಲ ಆದ್ರೆ, ನಲ್ವತ್ತು ವರ್ಷ ಆಗ್ತಿದ್ದಾಗೆ ತಾಯಿಯಾಗ್ಬೇಕು ಅನ್ನೋ ಬಯಕೆ ಹೆಚ್ಚಾಯ್ತು.

ಈ ಹಾದಿ ಸುಲಭವಾಗಿರ್ಲಿಲ್ಲ, ಸಾಕಷ್ಟು ಐವಿಎಫ್‌ ಸೆಂಟರ್‌ಗಳು ರಿಜೆಕ್ಟ್‌ ಮಾಡಿದ್ದವು. ನನ್ನ ಮಕ್ಕಳಿಗೆ ತಂದೆ ಇಲ್ಲದೇ ಇರಬಹುದು ಆದ್ರೆ ಅನ್‌ಕಂಡಿಷನಲ್‌ ಲವ್‌ ಅಂತೂ ಇದ್ದೇ ಇರುತ್ತೆ ಅಂತಾ ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ. ಭಾವನಾ ಅವರು ಸಿಂಗಲ್‌ ಪೇರೆಂಟ್‌ ಆಗಿ ಕಾನೂನಾತ್ಮಕವಾಗಿಯೇ ಐವಿಎಫ್‌ ಮೂಲಕ ತಾಯಿಯಾಗಲಿದ್ದಾರೆ.

Exit mobile version