BosstvKannada

ಮದುವೆಗೆ ಸಜ್ಜಾದ ಕುಲ್‌ದೀಪ್‌ ಅದ್ಧೂರಿ ನಿಶ್ಚಿತಾರ್ಥ.. ಹುಡುಗಿ ಯಾರು?

ಟೀಮ್ ಇಂಡಿಯಾದ ಸ್ಪಿನ್ನರ್‌ ಕುಲ್‌ದೀಪ್‌ ಯಾದವ್ ಸದ್ದಿಲ್ಲದೇ ಜೂನ್ 4 ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾರತದ ಮಾರಕ ಸ್ಪಿನ್ನರ್‌ ಎಂದೇ ಖ್ಯಾತಿಯಾಗಿರುವ ಕುಲ್‌ದೀಪ್‌ ತನ್ನ ಗೆಳತಿ ವಂಶಿಕಾ ಜೊತೆ ಎಂಗೇಜ್‌ ಆಗಿದ್ದಾರೆ..

ಕುಲ್‌ದೀಪ್‌ ಯಾದವ್ ಹಾಗೂ ವಂಶಿಕಾ ಇಬ್ಬರು ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ಅನೇಕ ವರ್ಷಗಳ ತಮ್ಮ ಪ್ರೀತಿಯನ್ನ ಮದುವೆ ಹಂತಕ್ಕೆ ತಂದಿದ್ದಾರೆ. ವಂಶಿಕಾ ಎಲ್‌ಐಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉತ್ತರ ಪ್ರದೇಶದ ಲಖನೌದ ಶ್ಯಾಮ್ ನಗರದಲ್ಲಿ ವಾಸ ಮಾಡುತ್ತಿದ್ದಾರೆ. ಜೂನ್ 4 ರಂದು ಉತ್ತರ ಪ್ರದೇಶದ ಲಖನೌದ ಖಾಸಗಿ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಫೋಟೋಗಳು ವೈರಲ್‌ ಆಗುತ್ತಿದೆ.

ಜೂನ್ 29 ರಂದು ಕುಲ್‌ದೀಪ್‌ ಯಾದವ್ ಮತ್ತು ವಂಶಿಕಾ ವಿವಾಹ ನಡೆಯಬೇಕಿತ್ತು. ಆದರೆ ಇಂಗ್ಲೆಂಡ್ ಪ್ರವಾಸ ಇರುವ ಕಾರಣ ಮದುವೆ ಸದ್ಯಕ್ಕೆ ಮುಂದೂಡಲ್ಪಟ್ಟಿದ್ದು, ಕುಲ್​ದೀಪ್ ಯಾದವ್ ಮತ್ತು ವಂಶಿಕಾ ಈ ವರ್ಷದ ಅಂತ್ಯದ ವೇಳೆಗೆ ಹಸೆಮಣೆ ಏರಬಹುದು ಎಂದು ಹೇಳಲಾಗುತ್ತಿದೆ..

Exit mobile version