Site icon BosstvKannada

ಬ್ಲ್ಯಾಕ್‌ಬಾಕ್ಸ್‌ ಬಗ್ಗೆ ಏವಿಯೇಷನ್‌ ಮಿನಿಸ್ಟರ್‌ ಏನಂದ್ರು?

ಗುಜರಾತ್‌ ವಿಮಾನ ದುರಂತದ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅಹಮದಾಬಾದ್‌ನ ಬಿಜೆ ಮೆಡಿಕಲ್‌ ಹಾಸ್ಟೆಲ್‌ ಬಿದ್ದಿದ್ದರಿಂದ 241 ಪ್ರಯಾಣಿಕರೂ ಸೇರಿ ಒಟ್ಟು 274 ಜನರು ಮೃತಪಟ್ಟಿದ್ದು, ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದಾರೆ.. ಮತ್ತೊಂದೆಡೆ, AI-171 ವಿಮಾನ ಜಗತ್ತಿನ ಸೇಫೆಸ್ಟ್‌ ವಿಮಾನ ಆಗಿದ್ರೂ ಪತನಗೊಂಡಿದ್ದು ಹೇಗೆ ಅನ್ನೋ ಅನುಮಾನಗಳು ಕಾಡುತ್ತಿವೆ.

ಇದೇ ವಿಚಾರವಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜಾರಪು ಸುದ್ದಿಗೋಷ್ಠಿ ನಡೆಸಿ, ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.. ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಗೆ ಮೂರು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ ಅಂತಾ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ..

ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಅದನ್ನು ಈಗಾಗಲೇ ವಿಮಾನ ಅಪಘಾತದ ಹಿಂದಿನ ಕಾರಣಗಳನ್ನು ಪತ್ತೆ ಮಾಡುವ ತಂಡವು ಡಿಕೋಡಿಂಗ್ ಕಳುಹಿಸಿದೆ. ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ ಈ ಬಗ್ಗೆ ತನಿಖೆ ನಡೆಸಲಿದೆ. ಆದಷ್ಟು ಬೇಗ ವಿಮಾನ ಅಪಘಾತದ ಹಿಂದಿನ ಕಾರಣ ಹೊರಬರಲಿದೆ ಅಂತಾ ರಾಮ್ ಮೋಹನ್ ನಾಯ್ಡು ಮಾಹಿತಿ ನೀಡಿದ್ದಾರೆ.

ಇನ್ನು, ವಿಮಾನವು ಜೂನ್‌ 12ರಂದು ಮಧ್ಯಾಹ್ನ 1.38ಕ್ಕೆ ಅಹಮದಾಬಾದ್ ನಿಂದ ಲಂಡನ್ ಗೆ ಟೇಕಾಫ್ ಆಗಿತ್ತು. 1.39ಕ್ಕೆ ಟೇಕಾಫ್ ಆದ ತಕ್ಷಣ ವಿಮಾನದ ಪೈಲೆಟ್ ಎಟಿಸಿಯನ್ನು ಸಂಪರ್ಕಿಸಿದ್ದರು. ಆ ವೇಳೆ ಪೈಲೆಟ್ ಮೇ ಡೇ ಎಂದು ಘೋಷಿಸಿದ್ದರು. ಆದರೆ ಎಟಿಸಿ ನೀಡಿದ ಪ್ರತಿಕ್ರಿಯೆ ವಿಮಾನಕ್ಕೆ ತಲುಪಿರಲಿಲ್ಲ ಅಂತಲೂ ಕೇಂದ್ರ ಸಚಿವರು ಮಾಹಿತಿ ನೀಡಿದರು.

ವಿಶೇಷವೆಂದರೆ ದುರಂತಕ್ಕೆ ಮುನ್ನ ವಿಮಾನವು ಪ್ಯಾರಿಸ್ ದಿಲ್ಲಿ ಅಹಮದಾಬಾದ್ ಮಾರ್ಗವನ್ನು ಯಾವುದೇ ತೊಂದರೆ ಇಲ್ಲದೆ ಪೂರ್ಣಗೊಳಿಸಿತ್ತು ಅಂತಲೂ ಹೇಳಿದರು.. ಸದ್ಯ ಆಸ್ಪತ್ರೆಯಲ್ಲಿ ಇನ್ನೂ ಹಲವರು ನರಳಾಡುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ..

Exit mobile version