Site icon BosstvKannada

ಪ್ಲಾಸ್ಟಿಕ್‌ ಬಾಟಲಿ ನೀರು ಕುಡಿತೀರಾ? ಹಾಗಾದ್ರೆ ಎಚ್ಚರ..?

ದುಡ್‌ ಕೊಟ್ಟು ಎಲ್ಲಂದ್ರಲ್ಲಿ ವಾಟರ್‌ ಬಾಟಲ್‌ ಖರೀದಿಸಿ ನೀರು ಕುಡಿಯೋ ಅಭ್ಯಾಸ ಇದ್ಯಾ? ರೈಲ್ವೇ ಸ್ಟೇಷನ್‌, ಬಸ್‌ ನಿಲ್ದಾಣ ಹೀಗೆ ಸಿಕ್‌ ಸಿಕ್ಕಲ್ಲಿ ನೀರಿನ ಬಾಟಲಿ ಕರೀದಿಸೋ ಅಭ್ಯಾಸ ಇದ್ರೆ ಈ ಕೂಡ್ಲೆ ನಿಲ್ಲಿಸಿ. ಯಾಕಂದ್ರೆ ಇದರಷ್ಟು ಡೇಂಜರಸ್‌ ನೀರು ಮತ್ತೊಂದಿಲ್ಲ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಈ ಆತಂಕಕಾರಿ ಮಾಹಿತಿಯನ್ನು ತಿಳಿಸಿದೆ.

ಪ್ಲಾಸ್ಟಿಕ್ ಬಾಟಲಿ ನೀರು ಕುಡಿಯುವುದರಿಂದ ಮನುಷ್ಯನ ದೇಹದೊಳಕ್ಕೆ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರಿಕೊಳ್ಳುತ್ತೆ. ಇದು ರಕ್ತಪ್ರವಾಹದ ಮೇಲೆ ಪರಿಣಾಮ ಬೀರುತ್ತೆ. ಇದರಿಂದ ಬಹು ಅಂಗಾಗ ವೈಕಲ್ಯಗಳು ಸಂಭವಿಸುವ ಸಾದ್ಯತೆ ಇದೆ. ಗರ್ಭಿಣಿಯರು ಪ್ಲಾಸ್ಟಿಕ್‌ ಬಾಟಲಿ ನೀರನ್ನ ಕುಡಿಯೋದ್ರಿಂದ ಮಗುವಿನ ದೇಹವನ್ನೂ ಸೇರುತ್ತದೆ.

ತಾಯಿಯ ಹೊಕ್ಕಳ ಬಳ್ಳಿ ಮೂಲಕ ಮಗುವಿನ ದೇಹ ಸೇರಿ ಮಗುವಿನ ಆರೋಗ್ಯವನ್ನೂ ಏರುಪೇರು ಮಾಡಲಿದೆ. ನಿರಂತರವಾಗಿ ಯಾರು ಒಂದೇ ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿಯುತ್ತಾರೆ ಅವರಿಗೆ ಮುಂಬರುವ ದಿನಗಳಲ್ಲಿ ಲಿವರ್ ಕ್ಯಾನ್ಸರ್ ಮತ್ತು ವೀರ್ಯಾಣುಗಳ ಸಂಖ್ಯೆಯಲ್ಲಿ ಕೊರತೆ ಕಂಡುಬರುವ ಸಾಧ್ಯತೆ ಕೂಡ ಹೆಚ್ಚಾಗಿದೆ.

Exit mobile version