Site icon BosstvKannada

ಪ್ರಾಣಿ ತ್ಯಾಜ್ಯ ಸಂಸ್ಕರಣ ಘಟಕ ಉದ್ಘಾಟನೆಗೆ ವಿರೋಧ ವ್ಯಕ್ತ

ಪ್ರಾಣಿ ತ್ಯಾಜ್ಯ ಘಟಕದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿಂದ ಇದನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಹಾಗೂ ಇಲ್ಲಿನ ಕೈಪಡೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಬಂಡೆಯಲ್ಲಿ ನಿರ್ಮಿಸಿದ್ದ ಘಟಕ ಉದ್ಘಾಟನೆ ಸಮಾರಂಭದಲ್ಲಿ ಕೆಲ ಕಾಲ ಪ್ರತಿಭಟಿನೆ ನಡೆಸಿ ಉದ್ಘಾಟನೆಗೆ ಆಗಮಿಸಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಶಾಸಕಿ ಮಂಜುಳಾ ಲಿಂಬಾವಳಿ ಅವರ ವಿರುದ್ಧ ಪ್ರತಿಭಟಿಸಿದರು. ಉದ್ಘಾಟನೆಗೆ ಅಡ್ಡಿಪಡಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದು ಪೊಲೀಸರು ಪರಿಸ್ಥಿತಿಯನ್ನು ತೆಳುವುಗೊಳಿಸಿದರು.

ಇಲ್ಲಿನ ವಾತವರಣ, ನೀರು ಕಲುಷಿತಗೊಂಡಿದೆ. ಇಲ್ಲಿನ ಜನರಿಗೆ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಈ ಪ್ರಾಣಿ ಸಂಸ್ಕರಣ ಘಟಕ ನಿರ್ಮಿಸಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡಿ ಅನಾರೋಗ್ಯ ಪೀಡಿತರಾಗುವುದು ಬೇಡವೆಂದು ನಮ್ಮ ಕಾಳಜಿ ಎಂದು ಪ್ರತಿಭಟನಾಕಾರರು. ‌

ಈವೇಳೆ ಮಾತನಾಡಿ ಮಾಹಿತಿ ನೀಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಬೇಡ, ಮಿಟಗಾನಹಳ್ಳಿಯಲ್ಲಿ‌ ಕಸದ ರಾಶಿ ಹಾಕಿ ರಸ್ತೆ, ಕೆರೆ, ಕುಡಿಯುವ ನೀರು ಹಾಳಾಗಿದ್ದು ಇವೆಲ್ಲವನ್ನು ಸರಿಪಡಿಸಲು ಬಿಬಿಎಂಪಿ ಈ‌ ಕೂಡಲೇ ಪೆನಾಲ್ಟಿ ಟ್ಯಾಕ್ಸ್ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರು, ಎರಡು ಪಕ್ಷದ ಮುಖಂಡರು, ಅಧಿಕಾರಿಗಳು, ಬಾನ ಸಂಸ್ಥೆಯ ಸದಸ್ಯರು ಮತ್ತಿತರರು ಭಾಗಿಯಾಗಿದ್ದರು. ‌

Read Also : ಗುಂಡಿ ಮುಚ್ಚೋಕೆ ಫೀಲ್ಡ್‌ಗೆ ಇಳಿದ ಡಿಕೆಶಿ, ಗುಣಮಟ್ಟ ಕಾಪಾಡಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ: ಡಿಸಿಎಂ ಡಿ.ಕೆ ಶಿವಕುಮಾರ್

Exit mobile version