ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್. 2025-26ನೇ ಸಾಲಿನ ಅಸೆಸ್‌ಮೆಂಟ್ ಇಯರ್‌ನಲ್ಲಿ ಸಲ್ಲಿಸಲಾಗುವ ಐಟಿ ರಿಟರ್ನ್ಸ್‌ಗೆ (ITR) ಇರುವ ಡೆಡ್‌ಲೈನ್‌ಅನ್ನ ವಿಸ್ತರಿಸಲಾಗಿದೆ. ಜುಲೈ 31ಕ್ಕೆ ಇದ್ದ ಗಡುವನ್ನು, ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್, ಸೆಪ್ಟೆಂಬರ್ 15ರವರೆಗೆ ಎಕ್ಸ್‌ಟೆಂಡ್ ಮಾಡಿದೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ವಿಚಾರವನ್ನ ತಿಳಿಸಲಾಗಿದೆ. ಜುಲೈ 31ರಿಂದ ಜೂನ್ 15ರವರೆಗೆ ವಿಸ್ತರಣೆ ಮಾಡೋ ದ್ರಿಂದ ಐಟಿಆರ್ ಫಾರ್ಮ್ಗಳಲ್ಲಿ ಬಹಳಷ್ಟು ಪರಿಷ್ಕರಣೆ ಮಾಡಲು ಕಾಲಾವಕಾಶ ದೊರೆಯುತ್ತೆ, ಇದರ ಜೊತೆಗೆ ಟಿಡಿಎಸ್ ಕ್ರೆಡಿಟ್‌ಗೂ ಕೂಡ ಅನುಕೂಲವಾಗಲಿದೆ ಅಂತಾ ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಸಿಡಿಬಿಟಿ ಪ್ರಕಾರ ಈ 2025-26ನೇ ಅಸೆಸ್‌ಮೆಂಟ್ ಇಯರ್‌ನ ಇನ್‌ಕಮ್ ಟ್ಯಾಕ್ಸ್ ರಿಟರ್ನ್‌ನಲ್ಲಿ ತೆರಿಗೆ ಹೊಂದಾಣಿಕೆ ನಿಯಮ ಸರಳಗೊಳಿಸಿರುವುದು, ಪಾರದರ್ಶಕತೆ ಹೆಚ್ಚಿಸಿರುವುದು, ನಿಖರ ಮಾಹಿತಿ ಸಿಗುವಂತೆ ಮಾಡಿರುವುದು ಇತ್ಯಾದಿ ಹಲವು ರೀತಿಯ ರಚನಾತ್ಮಕ ಪರಿಷ್ಕರಣೆ ಮತ್ತು ಬದಲಾವಣೆಗಳನ್ನು ತರಲಾಗಿದೆ.
