Site icon BosstvKannada

ತಾಳ್ಮೆಯ ಸಿಹಿ RCB ಅಭಿಮಾನಿಗಳ ಪಾಲಿಗಿರಲಿ : ಆರ್‌ಸಿಬಿಗೆ ಸಿಎಂ ಸಿದ್ದರಾಮಯ್ಯ ವಿಶ್‌..!

18ನೇ ಆವೃತ್ತಿಯ ಐಪಿಎಲ್ (IPL) ಪಂದ್ಯಾವಳಿಯ ಹೈವೋಲ್ವೇಜ್ ಫೈನಲ್ RCB vs Punjab kings ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. IPL 2025 ರ ಕೊನೆ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಆರ್‌ಸಿಬಿ ವರ್ಸಸ್‌ ಪಂಜಾಬ್‌ ಕಿಂಗ್ಸ್‌ ಹೈವೋಲ್ಟೇಜ್‌ ಪಂದ್ಯ ಇದಾಗಿದೆ..

ರಾಜ್ಯದಲ್ಲಿ ಇಂದಿನ ಮ್ಯಾಚ್‌ ಫೀವರ್‌ ಜೋರಾಗಿದ್ದು, ಆರ್‌ಸಿಬಿ ಕಪ್‌ ಗೆಲ್ಲಲು ಒಂದೇ ಹೆಜ್ಜೆ ಬಾಕಿ ಇದೆ.. ಹೀಗಾಗಿ ರಾಜ್ಯದಲ್ಲಿ ಆರ್‌ಸಿಬಿ ಫ್ಯಾನ್ಸ್‌ ಹರ್ಷೋದ್ಧಾರ ಮುಗಿಲು ಮುಟ್ಟಿದೆ.. ಆರ್‌ಸಿಬಿ ಗೆಲುವಿಗಾಗಿ ಫ್ಯಾನ್ಸ್‌ ದೇವರ ಮೊರೆ ಹೋಗಿದ್ದಾರೆ.. ರಾಜ್ಯದೆಲ್ಲೆಡೆ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗ್ತಿದೆ..

ಇನ್ನು, ಆರ್‌ಸಿಬಿಗೆ ಇಡೀ ರಾಜ್ಯವೇ ಬೆನ್ನಲುಬಾಗಿದೆ.. ಆರ್‌ಸಿಬಿಗೆ ಬೆಂಬಲ ಸೂಚಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌, ಕೇಂದ್ರ ಸಚಿವ ಕುಮಾರ್‌ಸ್ವಾಮಿ ಹಾಗೂ ಗಣ್ಯರು ಸೋಷಿಯಲ್‌ ಮೀಡಿಯಾದಲ್ಲಿ ಟ್ವಿಟ್ ಮೂಲಕ ಆರ್‌ಸಿಬಿಗೆ ವಿಶ್‌ ಮಾಡಿದ್ದಾರೆ..

ಈ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, ಆರ್‌ಸಿಬಿ ತಂಡದ ಸೋಲು- ಗೆಲುವು, ಏಳು – ಬೀಳುಗಳಲ್ಲಿ ಸದಾ ಜೊತೆ ನಿಂತು, ಮೊದಲ ಆವೃತ್ತಿಯಿಂದ ಇಂದಿನ ವರೆಗೂ ಅದೇ ರೀತಿಯ ಪ್ರೀತಿ – ಸ್ಪೂರ್ತಿ ನೀಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿ ಎನ್ನುವುದು ನನ್ನ ಅಂತರಾಳದ ಬಯಕೆ. “ತಾಳ್ಮೆಯ ಫಲ ಸಿಹಿಯಾಗಿರುತ್ತದೆಯಂತೆ”, ಆ ಸಿಹಿ ಇಂದು ಕನ್ನಡಿಗರ ಮತ್ತು ಜಗತ್ತಿನಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳ ಪಾಲಿಗಿರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ವಿರಾಟ್ ಕೊಹ್ಲಿಯ ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಗೆ ಮುಕ್ತಿ ಸಿಗಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ, ಕನಸು ಹಾಗೂ ಹಾರೈಕೆಯಾಗಿದೆ.

ಇದೀಗ ಫೈನಲ್ ಪಂದ್ಯದ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದು, ಅದೆ ಷ್ಟೋ ವರ್ಷಗಳ ಕಾಯುವಿಕೆಯ ಬಳಿಕ ಆರ್ ಸಿಬಿ ತಂಡವು ಫೈನಲ್ ಪ್ರವೇಶಿಸಿದೆ. ಇದಕ್ಕಿಂತ ಉತ್ತಮ ವಿಷಯ ಬೇರೊಂದಿಲ್ಲ ಆರ್‌ಸಿಬಿಯ ಸಾಧನೆಯ ಶಿಖರಕ್ಕೆ ಇನ್ನೊಂದೆ ಹೆಜ್ಜೆ ಬಾಕಿ ಇದೆ ಎಂದರು.

ಇಡೀ ಟೂರ್ನಿಯುದ ಕೂ ಬಹಳ ಉತ್ತಮವಾಗಿ ಕಾಣಿಸಿಕೊಂಡಿರುವ ಆರ್ ಸಿಬಿಯು ಇನ್ನೊಂದೇ ಒಂದು ಪಂದ್ಯ ದಲ್ಲಿಇಡೀ ಟೂರ್ನಿಯುದ್ದಕ್ಕೂ ಬಹಳ ಉತ್ತಮವಾಗಿ ಕಾಣಿಸಿಕೊಂಡಿರುವ ಆ‌ರ್ ಸಿಬಿಯು ಇನ್ನೊಂದೇ ಒಂದು ಪಂದ್ಯದಲ್ಲಿ ಗೆಲುವನ್ನು ಸಾಧಿಸಿದರೆ 17 ವರ್ಷಗಳ ವನವಾಸಕ್ಕೆ ಬ್ರೇಕ್ ಬಿದ್ದಂತೆ ಆಗುತ್ತದೆ. ಅದೇನೇ ಆಗಲಿ ಈ ಬಾರಿ ಆರ್‌ಸಿಬಿ ಗೆಲ್ಲಲೇಬೇಕು, ಕಪ್ ಬೆಂಗಳೂರಿಗೆ ತರಲೇಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಆರ್‌ಸಿಬಿಯೊಂದಿಗೆ ಇಡೀ ಅಭಿಮಾನಿ ಬಳಗ ಮಾತ್ರವಲ್ಲ, ಕರ್ನಾಟಕದ ಜನತೆ, ಕರ್ನಾಟಕ ಸರ್ಕಾರ ಕೂಡ ನಿಮ್ಮೊಂ ದಿಗೆ ಇದೆ, ನಿಮ್ಮ ಒಂದು ಹೆಜ್ಜೆಗೆ ಇಡೀ ಕರ್ನಾಟಕ ಮಾತ್ರವಲ್ಲ ಪ್ರಪಂಚವೇ ಕಾತುರದಿಂದ ಕಾಯುತ್ತಿದೆ. ನನಗೆ
ಸಂಪೂರ್ಣ ನಂಬಿಕೆ ಇದೆ. ದೇವರಿದ್ದಾನೆ ಒಳ್ಳೇದೇ ಆಗುತ್ತೆ ಎಂದು ಡಿಕೆ ಶಿವಕುಮಾರ್ ಶುಭಹಾರೈಸಿದ್ದಾರೆ.

ಆರ್‌ಸಿಬಿ ಯೊಂದಿಗೆ ಇಡೀ ಅಭಿಮಾನಿ ಬಳಗ ಮಾತ್ರವಲ್ಲ, ಕರ್ನಾಟಕದ ಜನತೆ, ಕರ್ನಾಟಕ ಸರ್ಕಾರ ಕೂಡ ನಿಮ್ಮೊಂದಿಗೆ ಇದೆ, ನಿಮ್ಮ ಒಂದು ಹೆಜ್ಜೆಗೆ ಇಡೀ ಕರ್ನಾಟಕ ಮಾತ್ರವಲ್ಲ ಪ್ರಪಂಚವೇ ಕಾತುರದಿಂದ ಕಾಯುತ್ತಿದೆ.
ನನಗೆ ಸಂಪೂರ್ಣ ನಂಬಿಕೆ ಇದೆ. ದೇವರಿದ್ದಾನೆ ಒಳ್ಳೇದೇ ಆಗುತ್ತೆ ಎಂದು ಡಿಕೆ ಶಿವಕುಮಾರ್ ಶುಭಹಾರೈಸಿದ್ದಾರೆ.

18 ವರ್ಷಗಳಿಂದ ಕಪ್ ಗೆಲ್ಲದ ಆರ್‌ಸಿಬಿ ಈ ಸಲ ಟ್ರೋಫಿಗೆ ಮುತ್ತಿಡಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಅದರಂತೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರು ಆದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕೂಡ RCB ತಂಡಕ್ಕೆ ಶುಭ ಹಾರೈಸಿದ್ದಾರೆ.

ಮಾಧ್ಯಮಗಳ ಜತೆ ಮಾತಾಡಿದ ಅವರು, ಹಲವಾರು ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್‌ಗೆ ಬಂದಿದೆ. ಎಲ್ಲರಲ್ಲೂ ದೊಡ್ಡಮಟ್ಟದ ನಿರೀಕ್ಷೆ ಇದ್ದು ಫೈನಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಪ್ರಶಸ್ತಿ ಪಡೆ ಯಲಿ. ತಂಡದಲ್ಲಿ ಎಲ್ಲರು ಅತ್ಯುತ್ತಮ ಪ್ರದರ್ಶನ ನೀಡಲಿ. ಫೈನಲ್‌ನಲ್ಲಿ ಕಪ್ ಪಡೆಯುವಂತಹ ಎಲ್ಲ ಆಟಗಾರರ ಶ್ರಮದಿಂದ ಯಶಸ್ಸು ಕಾಣಲಿ ಎಂದು ನಾನು ಕೂಡ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಆರ್‌ಸಿಬಿ ಗೆಲುವಿಗೆ ಶುಭ ಕೋರಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಆರ್‌ಸಿಬಿ ನಿಶ್ಚಿತವಾಗಿ ಗೆದ್ದೇಗೆಲ್ಲುವ ವಿಶ್ವಾಸ ನಮಗೆಲ್ಲರಿಗೂ ಇದೆ. ಆಲ್ ದ ಬೆಸ್ಟ್ ಆರ್‌ಸಿಬಿ, ಗೆದ್ದು ಬನ್ನಿ ಅಂತಾ ವಿಶ್‌ ಮಾಡಿದ್ದಾರೆ..

Exit mobile version