RCB is not a team it’s an emotion for karnataka ಅನ್ನೋ ಹಾಗೇ ಆರ್ಸಿಬಿಗೆ ಸೆಪರೇಟ್ ಫ್ಯಾನ್ ಬೇಸ್ಯೇ ಇದೆ. ಅದ್ರಲ್ಲಂತೂ ಕಿಂಗ್ ಕೋಹ್ಲಿ ಅಂದ್ರೆ ಕರುನಾಡ ಜನತೆ ಪ್ರಾಣ ಸಹ ಬಿಡ್ತಾರೆ.. ವಿರಾಟ್ ಕೊಹ್ಲಿ ಮೇಲೆ ಕರುನಾಡ ಜನತೆಗೆ ಎಲ್ಲಿಲ್ಲದ ಪ್ರೀತಿ.. ಇಂದಿನ ಮ್ಯಾಚ್ನಲ್ಲಿ ಆರ್ಸಿಬಿ ಗೆಲುವಿಗಾಗಿ ಕೊಹ್ಲಿ ಫ್ಯಾನ್ಸ್ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.. ಇನ್ನು ವಿರಾಟ್ ಕೊಹ್ಲಿ ಜರ್ಸಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದು, ಅಭಿಮಾನಿಗಳು ಬೆಳಗ್ಗೆಯಿಂದಲೇ ಸ್ಪೋರ್ಟ್ಸ್ ಅಂಗಡಿಗಳಿಗೆ ಮುಂದೆ ಕ್ಯೂ ನಲ್ಲಿ ನಿಂತು ಜರ್ಸಿ ಖರೀದಿಸಿದ್ದಾರೆ..
ಕೊಹ್ಲಿ ಜರ್ಸಿಗೆ ಬೇಡಿಕೆ ಅಪಾರ. ಕೋಹ್ಲಿಯ 18 ನಂಬರ್ ಜರ್ಸಿಯು ತಂಡದ ಶಕ್ತಿಯ ಸಂಕೇತವಾಗಿದ್ದು, ಮೈಸೂರಿನ ಪ್ರತಿಯೊಂದು ಬೀದಿಯಲ್ಲೂ ಈ ಜರ್ಸಿಗಳು ಕಾಣಿಸುತ್ತಿವೆ. ಆರ್ಸಿಬಿಯ ಗೆಲುವಿನ ಆಶಯದೊಂದಿಗೆ, ಅಭಿಮಾನಿಗಳು ತಮ್ಮ ಬೆಂಬಲವನ್ನು ಜರ್ಸಿಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ಮೈಸೂರಿನಲ್ಲಿ ಕೆಂಪು ಮತ್ತು ಕಡು ನೀಲಿ ಬಣ್ಣದ ಕೋಹ್ಲಿಯ 18 ನಂಬರ್ ಜರ್ಸಿಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಮನಗೆದ್ದಿವೆ. ಕಳೆದ ಎರಡು ದಿನಗಳಲ್ಲಿ ಒಂದೇ ಸ್ಪೋರ್ಟ್ಸ್ ಅಂಗಡಿಯಲ್ಲಿ 3,000ಕ್ಕೂ ಹೆಚ್ಚು ಜರ್ಸಿಗಳು ಮಾರಾಟವಾಗಿವೆ, ಇದು ಆರ್ಸಿಬಿ ಜನಪ್ರಿಯತೆಯನ್ನು ತೋರಿಸುತ್ತದೆ. ಕೆಲವು ಅಂಗಡಿಗಳಲ್ಲಿ ಕೆಂಪು ಜರ್ಸಿಗಳ ಸ್ಟಾಕ್ ಖಾಲಿಯಾಗಿವೆ.. ಒಂದೇ ದಿನದಲ್ಲಿ ಸಾವಿರಾರು ಕೊಹ್ಲಿ ಜರ್ಸಿ ಮಾರಾಟವಾಗಿವೆ..

