18 ವರ್ಷಗಳ ಬಳಿಕ RCB ಐಪಿಎಲ್‌ನಲ್ಲಿ ಕಪ್ ಗೆದ್ದಿದೆ. ಆದ್ರೆ ಆರ್‌ಸಿಬಿ ಕಪ್ ರಾಜ್ಯಕ್ಕೆ ಅನಾಹುತ ತಂದಿಟ್ಟಿದೆ. ಸದ್ಯ ಆರ್‌ಸಿಬಿ ಕಪ್ ರಾಜ್ಯಕ್ಕೆ ಕಪ್ಪು ಚುಕ್ಕೆ ಎಂಬಂತೆ ಬಿಂಬಿಸಲಾಗ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸರ್ಕಾರದ ಬುಡಕ್ಕೂ ಬೆಂಕಿ ಇಟ್ಟಿದೆ. ಕಾಲ್ತುಳಿತ ದುರಂತದಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದು, ಕುಟುಂಬಸ್ಥರು ಕಣ್ಣಿರಲ್ಲೇ ಬದುಕುತ್ತಿದ್ದಾರೆ..
ಮೃತಪಟ್ಟವರಿಗೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರವೇನೋ ಘೋಷಿಸ್ತು, ಆದ್ರೆ ಈ ದುರಂತಕ್ಕೆ ಹೊಣೆ ಯಾರು? ಎಂಬುದು ಯಕ್ಷ ಪ್ರಜ್ಞೆಯಾಗೇ ಉಳಿದಿದೆ. ಆರ್‌ಸಿಬಿ ಮ್ಯಾನೇಜ್‌ಮೆಂಟಾ?, ರಾಜ್ಯ ಸರ್ಕಾರನಾ?ಅಥವಾ ಕೆಎಸ್‌ಸಿಎ? ಈವರಲ್ಲಿ ಒಬ್ರೂ ಕಾಲ್ತುಳಿತದ ಹೊಣೆ ಹೊರಲು ರೆಡಿಯಿಲ್ಲ. ಒಬ್ಬರ ಮೇಲೆ ಮತ್ತೊಬ್ಬರು ದೂರುತ್ತಿದ್ದಾರೆಯೇ ಹೊರತು.. ಬೇಜವ್ದಾರಿಯಿಂದ ಈ ದುರಂತ ಸಂಭವಿಸಿದೆ ಅಂತಾ ಒಪ್ಪಿಕೊಳ್ತಿಲ್ಲ.. ಇನ್ನು ಈ ಘಟನೆ ಕುರಿತು ಕೇಸ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದೀಗ ಈ ವಿಚಾರವಾಗಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಕಾಲ್ತುಳಿತ ಸಂದರ್ಭದಲ್ಲಿ ಮಕ್ಕಳಿಗೂ ಹಾನಿಯಾಗಿರುವ ಶಂಕೆ ಇದೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಕ್ಕಳ ಹಕ್ಕುಗಳ ಆಯೋಗ ತಿಳಿಸಿದೆ. ಅಷ್ಟೇ ಅಲ್ಲದೆ, ಎಷ್ಟು ಮಕ್ಕಳಿಗೆ ತೊಂದರೆಯಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸಿಐಡಿಗೆ ಪತ್ರ ಬರೆದಿದೆ.

