Site icon BosstvKannada

ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರನ್ನು ಟಾರ್ಗೆಟ್ ಮಾಡುತ್ತಿದೆ : ಬಿ.ವೈ. ವಿಜಯೇಂದ್ರ

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರನ್ನು ಟಾರ್ಗೆಟ್ ಮಾಡುತ್ತಿದೆ ಅಂತಾ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಬಿಜೆಪಿ ಶಾಸಕರನ್ನು ಹೆದರಿಸುವ ಕೆಲಸವನ್ನು ಮಾಡುತ್ತಿದೆ ಎಂದು ಬಿವೈ ವಿಜಯೇಂದ್ರ ಹೇಳಿದರು. ಬಿಜೆಪಿ ಶಾಸಕ ಭೈರತಿ ಬಸವರಾಜ್ ರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರವನ್ನು ಸರ್ಕಾರ ಮಾಡುತ್ತಿದೆ.. ಬಿಕ್ಲು ಶಿವ ಕೊಲೆ ಪ್ರಕರರಣದಲ್ಲಿ ತನ್ನದೇನೂ ಪಾತ್ರವಿಲ್ಲ ಅಂತ ಖುದ್ದು ಬಸವರಾಜ ಹೇಳಿದ್ದಾರೆ.

ಕೊಲೆಯಾದ ಶಿವನ ತಾಯಿ ಸಹ ಶಾಸಕನ ಹೆಸರನ್ನು ತಾನು ಹೇಳಿಲ್ಲ ಅಂತ ಹೇಳಿದ್ದಾರೆ ಅಂತ ಅವರು ಹೇಳಿದರು. ಹಾಗೇ ನೋಡಿದರೆ, ಬಿಕ್ಲು ತಾಯಿ ವಿಜಯಲಕ್ಷ್ಮಿ ಕಾಂಗ್ರೆಸ್ ಕಾರ್ಯಕರ್ತೆ ಅಲ್ಲ, ಆಕೆ ದೂರಿನಲ್ಲಿ ಶಾಸಕನ ಜೊತೆ ಇನ್ನೂ ನಾಲ್ವರ ಹೆಸರನ್ನು ದಾಖಲಿಸಿದ್ದಳು ಅಂತ ಗೃಹ ಸಚಿವ ಹೇಳಿದ್ದರು. ಬಸವರಾಜ್ ಅವರು ವರದಿಗಾರನೊಂದಿಗೆ ಮಾತಾಡುವಾಗ ತನ್ನಿಂದ ಜೀವ ಬೆದರಿಕೆ ಇದೆ ಅಂತ ಬಿಕ್ಲು ಶಿವ ಪೊಲೀಸ್ ದೂರು ದಾಖಲಿಸಿದ್ದ ಅಂತಲೂ ಹೇಳಿದ್ದರು. ಇದರಲ್ಲಿ ಬಸವರಾಜ ಅವರನ್ನು ಟಾರ್ಗೆಟ್ ಮಾಡುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ? ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದರು.

Exit mobile version