ಐಪಿಎಲ್ (IPL) 2025ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲುವು ಸಾಧಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಮುಂಬೈ 20 ರನ್‌ಗಳಿಂದ ಜಯಗಳಿಸಿದೆ. ಭಾನುವಾರ ನಡೆಯಲಿರುವ ಕ್ವಾಲಿಫೈರ್ – 2 ಪಂದ್ಯದಲ್ಲಿ ಪಂಜಾಬ್ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಲಿವೆ.
ಶುಕ್ರವಾರ ಮುಲ್ಲನ್ಪುರ್ ಮೈದಾನದಲ್ಲಿ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹಾರ್ದಿಕ್ ಪಡೆ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 228 ರನ್‌ಗಳನ್ನು ಕಲೆ ಹಾಕಿತು. ಈ ಬೃಹತ್ ಮೊತ್ತದ ಚೇಸಿಂಗ್‌ನಲ್ಲಿ ಗುಜರಾತ್ ತಂಡ ಹೋರಾಡಿ ಸೋಲು ಕಂಡಿತು. 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸಿತು. ಸಾಯಿ ಸುದರ್ಶನ್ ೮೦ ರನ್ ಮತ್ತು ವಾಷಿಂಗ್ಟನ್ ಸುಂದರ್ 48 ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಗುಜರಾತ್ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.
ಡೆತ್ ಓವರ್ನಲ್ಲಿ ಮುಂಬೈ ಬೌಲರ್‌ಗಳು ರನ್‌ಗಳನ್ನು ನಿಯಂತ್ರಿಸುತ್ತಿದ್ದಂತೆ, ಗುಜರಾತ್ ರನ್ ವೇಗಕ್ಕೆ ಬ್ರೇಕ್ ಬಿತ್ತು. ಮುಂಬೈ ಬೌಲರ್‌ಗಳಲ್ಲಿ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರೆ, ಬುಮ್ರಾ, ರಿಚರ್ಡ್ ಗ್ಲೀಸನ್, ಸ್ಯಾಂಟ್ನರ್ ಮತ್ತು ಅಶ್ವನಿ ಕುಮಾರ್ ತಲಾ ಒಂದು ವಿಕೆಟ್ ಉರುಳಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಪರ ರೋಹಿತ್ ಶರ್ಮಾ 50 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಾಯದಿಂ 81ರನ್ ಚಚ್ಚಿದರು. ಆರಂಭದಲ್ಲಿ ಎರಡು ವರದಾನ ಪಡೆದ ರೋಹಿತ್ ನಂತರ ಬೌಂಡರಿಗಳೊಂದಿಗೆ ಸಿಡಿದೆದ್ದರು. ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಈ ಸೀಸನ್ನಲ್ಲಿ ಗುಜರಾತ ಟೈಟಾನ್ಸ್ ತಂಡದ ಪರ ಅದ್ಭತ ಪ್ರದರ್ಶನ ನೀಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಟೂರ್ನಿ ಉದ್ಧಕ್ಕೂ ಉತ್ತಮ ಬೌಲಿಂಗ್ ಮಾಡಿ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಅವರು 15 ಪಂದ್ಯಗಳಲ್ಲಿ 25 ವಿಕೆಟ್ ಉರುಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಜೊತೆಗೆ ಪರ್ಪಲ್ ಕ್ಯಾಪ್ ಸಹ ಹೊಂದಿದ್ದಾರೆ. ಆದರೆ ಇವರ ಹೋರಾಟ ನಿನ್ನೆ ಕೊನೆಗೊಂಡಿದೆ.

