ಕಾಂಗ್ರೆಸ್ ಪಕ್ಷದಲ್ಲಿ ಶಾಸಕರ ಅಸಮಾಧಾನದ ಸ್ಫೋಟ ಯಾಕೋ ತಣ್ಣಗಾಗುವಂತೆ ಕಾಣ್ತಿಲ್ಲ. ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲಾ ರಾಜ್ಯ ಪ್ರವಾಸ ಕೈಗೊಂಡಿರುವ ಹೊತ್ತಲ್ಲೇ ಶಾಸಕ ಬಿ ಆರ್ ಪಾಟೀಲ್ ಮತ್ತೊಮ್ಮೆ ಬೇಸರ ಹೊರಹಾಕಿದಂತೆ ಕಾಣ್ತಿದೆ. ಸ್ವಪಕ್ಷದ ವಿರುದ್ಧ ಆರೋಪ ಮಾಡಿದ ಹಿನ್ನೆಲೆ ಬಿಆರ್ ಪಾಟೀಲ್​ ಅವರನ್ನು ಕರೆಸಿ ಸುರ್ಜೇವಾಲಾ ಮಾತುಕತೆ ನಡೆಸಿದ್ರು. ಮೀಟಿಂಗ್ ನಡೆದ ಮರುದಿನವೇ ಆಪ್ತರ ಜೊತೆ ಮಾತಾಡ್ತಾ ಬಿ.ಆರ್ ಪಾಟೀಲ್ ಬೇಸರ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಲಕ್ಕಿ, ಸಿಎಂ ಆಗಿಬಿಟ್ಟ ಎಂದಿದ್ದಾರೆ. ಬಿಆರ್ ಪಾಟೀಲ್ ಮಾತಿಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದಾರೆ.

ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಿ.ಆರ್.ಪಾಟೀಲ್ ರವರು ಸಿದ್ದರಾಮಯ್ಯರವರು ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಅವರ ಹೇಳಿಕೆ ಬಗ್ಗೆ ಮಾಹಿತಿಯಿಲ್ಲ. ಬಿ.ಆರ್.ಪಾಟೀಲ್ ಹಾಗೂ ನಾನು ಒಟ್ಟಿಗೆ ಶಾಸಕರಾಗಿದ್ದರಿಂದ ಹಾಗೂ ನನಗೆ ಮುಖ್ಯಮಂತ್ರಿಯಾಗಲು ಅವಕಾಶ ದೊರೆತಿದ್ದರಿಂದ, ಬಿ.ಆರ್.ಪಾಟೀಲ್ ರವರು ಈ ರೀತಿ ಹೇಳಿಕೆ ನೀಡಿರಬಹುದು ಎಂದರು.

ಹೌದಪ್ಪ ನಾನು ಅದೃಷ್ಟವಂತ

ಶಾಸಕ ಪಿಆರ್​ ಪಾಟೀಲ್ ಅವರ ಮಾತಿಗೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತಾಡಿದ್ದು, ಹೌದಪ್ಪ ನಾನು ಅದೃಷ್ಟವಂತ, ಸಿಎಂ ಆಗಿದ್ದೀನಿ. ನಾನೂ ಅವನೂ ಒಟ್ಟಿಗೆ ಶಾಸಕರಾಗಿದ್ವಿ ಎಂದ್ರು.

ಅವನು ಹೇಳಿದ ಈಗ ನಾನೇನು ಮಾಡ್ಲಿ

ಹೌದಯ್ಯ ಅವನು ಹೇಳಿದ್ದಾನೆ. ಅದಕ್ಕೆ ನಾನು ಏನು ಮಾಡಲಿ ಹೇಳಿ, ಬಿ ಆರ್ ಪಾಟೀಲ್ ಕರೆಸಿ ಮಾತಾಡ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಲಕ್ಕಿ, ಲಾಟರಿ ಹೊಡೆದುಬಿಟ್ಟ

ಮಂಡ್ಯದ ಕೆಆರ್ ಪೇಟೆಯಲ್ಲಿ ಫೋನ್​ನಲ್ಲಿ ಆಪ್ತರ ಜೊತೆ ಮಾತಾಡ್ತಿದ್ದ ಶಾಸಕ ಬಿಆರ್ ಪಾಟೀಲ್ ಅವರು, ಸಿದ್ದರಾಮಯ್ಯ ಲಕ್ಕಿ, ಲಾಟರಿ ಹೊಡೆದುಬಿಟ್ಟ. ಮುಖ್ಯಮಂತ್ರಿಯೂ ಆಗಿಬಿಟ್ಟ ಎಂದಿದ್ದಾರೆ. ಅಲ್ಲದೇ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಅವರನ್ನ ಮೊದಲು ಭೇಟಿ ಮಾಡಿಸಿದವನು ನಾನೇ. ಅವನ ಗ್ರಹಚಾರ ಚೆನ್ನಾಗಿತ್ತು ಸಿಎಂ ಆದ. ಇದು ನನ್ನ ಗ್ರಹಚಾರ ಎಂದು ಪರೋಕ್ಷವಾಗಿ ಬಿಆರ್ ಪಾಟೀಲ್ ಬೇಸರ ಹೊರಹಾಕಿದ್ದಾರೆ.

ನಮಗೆ ಗಾಡು ಇಲ್ಲ, ಫಾದರೂ ಇಲ್ಲ

ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್ ಪಾಟೀಲ್ ದೂರವಾಣಿ ಮೂಲಕ ಆಪ್ತರೊಡನೆ ಮಾತುಕತೆ ನಡೆಸಿದ ವಿಡಿಯೋ ರೆಕಾರ್ಡ್​ ಆಗಿದೆ. ನಮಗೆ ಗಾಡು ಇಲ್ಲ, ಫಾದರೂ ಇಲ್ಲ. ಸುರ್ಜೇವಾಲಾ ಅವರನ್ನ ಭೇಟಿಯಾಗಿ ಮಾತನಾಡಿದ್ದೇನೆ. ತುಂಬಾ ಗಂಭೀರವಾಗಿ ನನ್ನ ಮಾತುಗಳನ್ನ ಆಲಿಸಿದ್ದಾರೆ ಎಂದ್ರು.

ಹೈಕಮಾಂಡ್ ಏನು ಮಾಡುತ್ತೆ ನೋಡೋಣ

ಸುರ್ಜೇವಾಲಾ ಅವರ ಬಳಿ ಎಲ್ಲವನ್ನು ತಿಳಿಸಿದ್ದೇನೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ ಎಂದಿದ್ದಾರೆ. ಮಂಡ್ಯದ ಕೆ.ಆರ್ ಪೇಟೆಗೆ ಭೇಟಿ ನೀಡಿದ್ದ ವೇಳೆ ಈ ಸಂಭಾಷಣೆ ನಡೆದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ,ಕೇಂದ್ರ ಆಡಳಿತ ನ್ಯಾಯಮಂಡಳಿಯ ಐಪಿಎಸ್ ಅಧಿಕಾರಿಗಳ ಅಮಾನತ್ತು ಆದೇಶವನ್ನು ರದ್ದು ಮಾಡಿರುವ ಬಗ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Share.
Leave A Reply